ನಾನೂ ಕಲ್ಲು ನೀನೂ ಕಲ್ಲು
ನಿನ್ನ ಸ್ಥಾನ ಗರ್ಭಗುಡಿಯಲ್ಲೂ
ನಾನ್ಯಾಕೆ ಕಾಲ್ ಕೆಳಗಿನ ಮೆಟ್ಟಿಲು?
ಕೇಳಿತು ದೇವಾಲಯದ ಮೆಟ್ಟಿಲು | |
ಹೇಳಿತು ಗರ್ಭಗುಡಿಯ ಕಲ್ಲು
ನಮ್ಮಿಬ್ಬರ ಮೂಲ ಅದೇ ಬಂಡೆಕಲ್ಲು
ಶಿಲ್ಪಿ ನಿನ್ನ ಆರಿಸಿದ ಮೊದಲು
ದೇವರ ಬಿಂಬ ಕೆತ್ತಲು | |
ತುಂಡಾದೆ ಚೂರಾದೆ ನೀ ಮೂರೇಟಿಗೆ
ಸುಂದರ ಶಿಲ್ಪವಾದೆ ನಾ ನೂರೇಟಿಗೆ | |
ಮಾನವಾssss
ಕಷ್ಟವಿದೆ ಎಲ್ಲರಿಗೆ
ಅನಿವಾರ್ಯವದು ಬದುಕಿಗೆ
ಹೋರಾಡುವ ಛಲವಿದ್ದರೆ ನಿನಗೆ
ಬೀರುವೆ ನೀ ಜಯದ ನಗೆ | |
-- ಸುಮಂತ . ಬಂ. ಸು